ಕರ್ವಾಲೊ
ಪೂರ್ಣಚಂದ್ರ ತೇಜಸ್ವಿ
★★★★★
"ತೇಜಸ್ವಿಯವರ ನಾನೊದಿದ ಮೊದಲ ಪುಸ್ತಕ — ಒಂದು ವಿಭಿನ್ನವಾದ ಅನುಭವ."
ಲೇಖಕ, ಮಂದಣ್ಣ, ಲಕ್ಷ್ಮಣ, ಎಂಗ್ಟ, ಕಿವಿ, ಪ್ರಭಾಕರ, ಬಿರಿಯಾನಿ ಕರಿಯಪ್ಪ
ಮತ್ತು ಕೇಂದ್ರಬಿಂದು ಕರ್ವಾಲೊ — ಮಲೆನಾಡಿನ ಕಗ್ಗಾಡಿನಲ್ಲಿ ನಡೆಯುವ ಈ ಕಥೆ ಮುಗಿಯುವವರೆಗು ಓದುಗರನ್ನು
ಹಿಡಿದಿಟ್ಟುಕೊಳ್ಳುತ್ತದೆ. 176 ಪುಟಗಳ ಈ ಕಾದಂಬರಿಯ ಮುಖ್ಯ ಕಥಾಹಂದರ ಪಶ್ಚಿಮ ಘಟ್ಟಗಳ ಹಾರುವ ಓತಿಕೆತದ ಹುಡುಕಾಟ. ಮಂದಣ್ಣನ
ಮದುವೆ ಮತ್ತು ಬಂಧನದ ನಂತರ ಕಥೆ ವಿಭಿನ್ನ ತಿರುವು ಪಡೆಯುತ್ತದೆ. ತೇಜಸ್ವಿಯವರ ಬರಹಕ್ಕೆ ನಾನು ಮನಸೋತಿದ್ದಂತು ಕಂಡಿತ.
Fiction@veeru_jd_.11
ಜುಗಾರಿ ಕ್ರಾಸ್
ಪೂರ್ಣಚಂದ್ರ ತೇಜಸ್ವಿ
★★★★★
"ಮಲೆನಾಡು ಮೇಲಿನಿಂದ ನೋಡಲು ಎಷ್ಟೊಂದು ಮನಮೋಹಕ — ಆದರೆ ಒಳಗೆ ಹಂತಕರು ಹಸಿರ ಚಾದರ ಹೊತ್ತು ಸಂಪತ್ತು
ಲೂಟಿ ನಡೆಸುತ್ತಾರೆ."
ತೇಜಸ್ವಿ ಅವರು ಜುಗಾರಿ ಕ್ರಾಸಿನ ಕರಾಳ ಕಾಳದಂದೆಯ ಬಗ್ಗೆ ಸುಲಲಿತವಾಗಿ
ವಿವರಿಸುತ್ತಾ ಹೋಗಿದ್ದಾರೆ. ಪ್ರತಿ ಪದಗಳ ವರ್ಣನೆ ನಮ್ಮನ್ನ ಕಥೆಯೊಳಗೆ ವಿಲೀನವಾಗುವಂತೆ ವರ್ತಿಸುತ್ತವೆ. 24 ತಾಸಿನಲ್ಲಿ ನಡೆಯುವ
ಈ ಕಥೆ ಓದಲು ಶುರುಮಾಡಿದ ಕ್ಷಣದ ಕಾತುರತೆ ಕೊನೆಯವರೆಗು ಕರೆದೊಯ್ಯುತ್ತದೆ. ಓದುತ್ತಾ ಹೋದಂತೆ ನಾನೇ ಕಥೆಯೊಳಗೆ ಇದ್ದಿನೆನೊ ಅನ್ನೊ
ಭಾಸ.
Fiction@veeru_jd_.11
ಮದಕರಿ ನಾಯಕ
ಇತಿಹಾಸ ಕೃತಿ
★★★★★
"ನಮ್ಮ ಹೆಮ್ಮೆಯ ನಾಯಕರ ಬಗ್ಗೆ ಸ್ವತಃ ಓದಿದಾಗ ಮೈನವೇರಿಸುವಂತಿರುತ್ತೆ ಘಟನೆಗಳು."
ಎರಡನೆ ವಿಜಯನಗರ ಎಂದು ಕರೆಯಲ್ಪಡುವ ಚಿತ್ರದುರ್ಗ. ರಾಜಾದಿರಾಜ ಮದಕರಿ
ನಾಯಕ — ಮದ ಹತ್ತಿದ ಆನೆಯ ಮದವನ್ನ ನಿತ್ರಾಣಗೊಳಿಸಿದ ವೀರ, ಮತ್ತು ದುರ್ಗವನ್ನ ಕಾಯ್ದ ತಾಯಿ ವೀರವನಿತೆ ಓಬವ್ವ. ಅವರ ಸಾಹಸ,
ಆಡಳಿತ, ಜನಜಲಭಾಷಾ ಪ್ರೇಮ ತಿಳಿಸುತ್ತದೆ ಈ ಕೃತಿ.
Non-fiction14 October 2022
ಚಿದಂಬರ ರಹಸ್ಯ
ಪೂರ್ಣಚಂದ್ರ ತೇಜಸ್ವಿ
★★★★★
"ನಿಸರ್ಗ ಎಂದರೆ ತೇಜಸ್ವಿ, ತೇಜಸ್ವಿ ಎಂದರೆ ನಿಸರ್ಗ."
"ಒಟ್ಟಿನಲ್ಲಿ ಕ್ರಾಂತಿ ಆಗಬೇಕಪ್ಪ!" ಎಂದು ಶುರುವಾಗೊ ಈ ಕಾದಂಬರಿ
ಓದುಗರಿಗೆ ಪತ್ತೆದಾರಿ ಅನುಭವ ಕೊಡುತ್ತೆ. ರಾಮಪ್ಪ, ಚಂದ್ರ, ರಮೇಶ ಮತ್ತು ಜೋಸೆಫ್ — ನಾಲ್ಕು ಸ್ನೇಹಿತರ ಕ್ರಾಂತಿ, ಅಂಗಾಡಿ
ಏಲಕ್ಕಿ ಕೃಷಿ ಕುಸಿತ, ಜೋಗಿಹಾಳರ ಸಾವಿನ ಸಂಶಯ, ಮರ ಕಳ್ಳ ಸಾಗಣೆ, ರಫಿ ಮತ್ತು ಜಯಂತಿಯ ಪ್ರೀತಿ — ಎಲ್ಲವೂ ಸೆಳೆಯುತ್ತಾ
ಹೋಗುತ್ತದೆ.
Fiction14 October 2022
ಹೇಳಿ ಹೋಗು ಕಾರಣ
ರವಿ ಬೆಳಗೆರೆ
★★★★☆
"ಕನಸಿನಿಂದ ಹುಟ್ಟಿದ ಪ್ರೀತಿ ಕನಸು ನನಸಾಗದೆ ಅರ್ಧಕ್ಕೆ ಮುಗಿದು ದೂರವಾಗುತ್ತದೆ."
ಸಲಹೆ ಮೇರೆಗೆ ಓದಿದ ಅಕ್ಷರ ಮಾಂತ್ರಿಕನ ಪುಸ್ತಕ. ಮಿಠಾಯಿ ಮಾರುವ ಹಿಮವಂತ,
ಪ್ರಾರ್ಥನಾ, ದೇಬು, ಊರ್ಮಿಳೆ — ಪ್ರತಿ ಪಾತ್ರದಲ್ಲಿ ಒಂದು ಜೀವನಾನುಭವ. ಪ್ರತಿ ತಿರುವಿನಲ್ಲಿ ಕುತೂಹಲ ಕೆರಳಿಸುವ ಈ ಕತೆ ಓದಿದಾಗ
ನಿಮ್ಮಲ್ಲಿ ಅಡಗಿರುವ ಪಾತ್ರ ಸಿಗಬಹುದು. ಇನ್ನೇನು ಮುಗಿಯುತ್ತದೆ ಎನ್ನುವಾಗ ಕೆಳಗಿಡಲು ಮನಸ್ಸೇ ಬರುವುದಿಲ್ಲ.
Fiction1 February 2023
ಅಳಿದ ಮೇಲೆ
ಶಿವರಾಮ ಕಾರಂತ
★★★★★
"ಅಳಿದ ಮೇಲೂ ಸ್ಮರಣೆಯಲ್ಲಿರಲು ಗಳಿಸಬೇಕಾದುದು ಹಣ-ಆಸ್ತಿ ಅಲ್ಲ, ಬದುಕಿದ ರೀತಿ."
ನಾವೆಲ್ಲಾ ಹಲವಾರು ಜನರ ಜೀವನದಲ್ಲಿ ಒಂದು ಪಾತ್ರವಾಗಿಬಿಟ್ಟಿರುತ್ತೇವೆ.
ಅಳಿದ ಮೇಲೆ ಓದಿದ ಮೇಲೆ ಅನಿಸಿದ್ದು — ನಮ್ಮ ಜೀವನ ರುಚಿಇಲ್ಲದ ಒಂದು ದೀರ್ಘವಾದ ಊಟ ಎಂದು. ಸಂಸಾರ ಮತ್ತು ಸಮಾಜದಿಂದ
ಪಡೆದುದಕ್ಕಿಂತ ಹೆಚ್ಚಾಗಿ ಕೊಟ್ಟು ಹೋಗುವುದು ಬಹಳ ಮುಖ್ಯ ಎಂಬ ಮೌಲ್ಯ ಸಾರುತ್ತದೆ ಈ ಕೃತಿ.
Self-growth15 September 2023